ವಿಕಾರಿಣ್ಯಾಂ ತಸ್ಯಾಂ ಎಂಬ ಶ್ರುತಿ ಪ್ರಸಿದ್ಧವು.
ವಿಕಾರ ಪ್ರಕೃತಿಯಲ್ಲಲ್ಲದೆ ಪುರುಷನಲ್ಲಿಲ್ಲವಯ್ಯಾ.
ಪುರುಷನಿಲ್ಲದಿರೆ ಪ್ರಕೃತಿಯ ಕರ್ಮ ನಡೆಯದಯ್ಯಾ.
ಸೂರ್ಯಕಿರಣದಿಂದಾಗ ಜಲದಲ್ಲಿ ಸೂರ್ಯಬಿಂಬವಿರೆ,
ನಿಜ ಸೂರ್ಯನ ರೂಹು ಕೆಡದಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration vikāriṇyāṁ tasyāṁʼ emba śruti prasid'dhavu.
Vikāra prakr̥tiyallallade puruṣanallillavayyā.
Puruṣanilladire prakr̥tiya karma naḍeyadayyā.
Sūryakiraṇadindāga jaladalli sūryabimbavire,
nija sūryana rūhu keḍadayyā,
kapilasid'dhamallikārjunā.