ಹಬ್ಬಗಳೆಲ್ಲ ಉಬ್ಬುಬ್ಬಿ ಲಿಂಗದ
ಹಬ್ಬಕ್ಕೆ ಬಂದಬ್ಬರವ ನೋಡಾ!
ಲಿಂಗದ ಹಬ್ಬ ನಿಮ್ಮ ಬಾಯಿಗೆ ಒಬ್ಬಿಯಲ್ಲದೆ
ನಿಮ್ಮ ಜನನಕ್ಕೆ ಹಬ್ಬವೇನೊ,
ಕಬ್ಬಿಲ ಮಬ್ಬುಳ್ಳ ಕೊಬ್ಬಿಗರಿರಾ,
ಕಪಿಲಸಿದ್ಧಮಲ್ಲಿಕಾರ್ಜುನನೊಬ್ಬನರಿಯದಿರ್ದಡೆ?
Transliteration Habbagaḷella ubbubbi liṅgada
habbakke bandabbarava nōḍā!
Liṅgada habba nim'ma bāyige obbiyallade
nim'ma jananakke habbavēno,
kabbila mabbuḷḷa kabbigarirā,
kapilasid'dhamallikārjunanobbanariyadirdaḍe?