ಜ್ಞಾನಾಭ್ಯಾಸದಲ್ಲಿ ವಟಮೂಲಿಕೆಯ
ಬೀಜದಂತಿರಬಲ್ಲಡೆ ಭಕ್ತನಯ್ಯಾ.
ಆ ಜ್ಞಾನದಲ್ಲಿ ಅಗ್ನಿಯಂತಿರಬಲ್ಲಡೆ ಭಕ್ತನಯ್ಯಾ.
ಭಕ್ತನು ಭಕ್ತನು ಎಂದು ಬೆಳೆದ ಧಾನ್ಯಂಗಳನಟ್ಟು
ಬೆಟ್ಟಬಿಲ್ಲಯ್ಯನ ರೂಹಕ್ಕೆ ಒಟ್ಟಿ
ಭಕ್ತನಾದೆನೆಂಬವನ ಯುಕ್ತಿ
ಲೊಳಲೊಟ್ಟೆಯಂತೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Jñānābhyāsadalli vaṭamūlikeya
bījadantiraballaḍe bhaktanayyā.
Jñānadalli agniyantiraballaḍe bhaktanayyā.
Bhaktanu bhaktanu endu beḷeda dhān'yaṅgaḷanaṭṭu
beṭṭabillayyana rūhakke oṭṭi
bhaktanādenembavana yukti
loḷaloṭṭeyante nōḍā,
kapilasid'dhamallikārjunā.