ವಚನ - 1615     
 
ಕುಲಸೂತಕವಿಲ್ಲದ ಜಂಗಮ ಕೋಟ್ಯನುಕೋಟಿ. ಮಲಮುಟ್ಟದ ಜಂಗಮ ಕೋಟ್ಯನುಕೋಟಿ. ಶೀಲಸತ್ಯಸದಾಚಾರಿ ಜಂಗಮ ಕೋಟ್ಯನುಕೋಟಿ. ಹಲವು ಹೊಳೆಯಬಾರದ ಜಂಗಮ ಸುಳುಹಿನ ಕಳೆದೋರಿಸ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ ಮಹಾಮಹಿಮನು.