ಸರ್ವರೂ ದ್ರವ್ಯವಂತರು;
ಅವರು ಅವರಲ್ಲಿ ಆಸೆಯೆ ಅಯ್ಯಾ?
ಮಾಯಾವಿರಹಿತ, ಮಾಯಾಕೋಲಾಹಲ
ಪಾದವಿತ್ತುದಕವೆ ಪಾದೋದಕ,
ಮೋಕ್ಷದಾಯಕ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Sarvarū dravyavantaru;
avaru avaralli āseyē ayyā?
Māyāvirahita, māyākōlāhala
pādavittudakave pādōdaka,
mōkṣadāyaka nōḍā,
kapilasid'dhamallikārjunā.