Index   ವಚನ - 1635    Search  
 
ಕಾಮಿಯ ಕಾಮಿನಿಯ ನೋಡಿದಳೆಂಬಂತೆ, ಉಪಾಧಿಯ ನಿರುಪಾಧಿಲಿಂಗದ ಕೃಪೆಯಾಯಿತ್ತೆಂಬಂತೆ ನುಡಿವರಯ್ಯಾ. ಕಾಮಿನಿಯ ದೃಷ್ಟಿ ಕಾಮಿಯಲ್ಲಿರಲು ಕಾಮಿಯೆ ಅಯ್ಯಾ? ಲಿಂಗದ ದೃಷ್ಟಿ ಅಂಗಗುಣದವನಲ್ಲಿರಲು ಆತ ಲಿಂಗಗುಣಿಯೆ? ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.