ವಚನ - 1646     
 
ಎಲ್ಲರಿಗೆರಡು ಕಣ್ಣೆಂಬುದ ಲೋಕವೆಲ್ಲ ಬಲ್ಲದು. ಎನಗೆ ಮೂರು ಕಣ್ಣೆಂಬುದ ಲೋಕವೆಲ್ಲ ಬಲ್ಲದು. ಎರಡು ಕಣ್ಣಿನವನಲ್ಲ, ಮೂರು ಕಣ್ಣಿನವನಲ್ಲ, ಒಂದೆ ಕಣ್ಣು ನೋಡಾ, ಅಲ್ಲಮ ಕಪಿಲಸಿದ್ಧಮಲ್ಲಿಕಾರ್ಜುನ.