ವಚನ - 1677     
 
ಬೋಧವೆಂದಡೆ, ಕರ್ಣವನೂದಿ ಮಂತ್ರವ ಹೇಳಿದುದು ಭೋಧವೆ? ಅಲ್ಲಲ್ಲ! ಬೋಧವೆಂದಡೆ, ತನುತ್ರಯಸಾಕ್ಷಿ ನೀನೆ ಪರವಸ್ತು ಎಂಬುದೆ ನಿಜಬೋಧ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.