ಭವಿಯೆಂದಡೆ ಲಿಂಗವಿಲ್ಲದವ ಭವಿಯೇ? ಅಲ್ಲಲ್ಲ.
ಭವಿಯೆಂದಡೆ ವೇದವೇದಾಂತರವನೋದಿ,
ಲಿಂಗವ ಧರಿಸದವ ಭವಿಯೆ? ಅಲ್ಲಲ್ಲ.
ಅಂಗದ ಸ್ಥಿತಿಯನರಿದಡೇನಾಯಿತ್ತು?
ಗುಣ ತಿಳಿದು ಲಿಂಗವ ಕೊಡುವ ಗುರುವಿಲ್ಲ.
ಬಹಿರಂಗದಲ್ಲಿ ಲಿಂಗವಿರಹಿತ,
ಅಂತರಂಗದಲ್ಲಿ ಲಿಂಗಲೋಲುಪ್ತ.
ಹೊಲಬುಳ್ಳವನಾದಡೇನು,
ತಿಳಿಯದವರಿಲ್ಲದನ್ನಕ್ಕ?
ಸತ್ಕ್ರಿಯಾಸಾಮರಸ್ಯಕ್ಕೆ ಭವಿಯಲ್ಲದೆ
ಅನುಭವಗೋಷ್ಠಿಗೆ ಭವಿಯೆ? ಅಲ್ಲಲ್ಲ.
ಭವಿಯೆಂದಡೆ ಮದ್ಯಪಾನ
ಮಾಂಸಭಕ್ಷಣ ಪರಸ್ತ್ರೀಸಂಗ
ಪರಧನಚೋರತ್ವ ನಿಜವಸ್ತು
ಅಂತರತ್ವವಿದ್ದವನೆ ಭವಿಯಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Bhaviyendaḍe liṅgavilladava bhaviyē? Allalla.
Bhaviyendaḍe vēdavēdāntaravanōdi,
liṅgava dharisadava bhaviye? Allalla.
Aṅgada sthitiyanaridaḍēnāyittu?
Guṇa tiḷidu liṅgava koḍuva guruvilla.
Bahiraṅgadalli liṅgavirahita,
antaraṅgadalli liṅgalōlupta.
Holabuḷḷavanādaḍēnu,
tiḷiyadavarilladannakka?
Satkriyāsāmarasyakke bhaviyallade
anubhavagōṣṭhige bhaviye? Allalla.
Bhaviyendaḍe madyapāna
mānsabhakṣaṇa parastrīsaṅga
paradhanacōratva nijavastu
antaratvaviddavane bhaviyayyā,
kapilasid'dhamallikārjunā.