ಲಿಂಗಾಂಗಿಯಾದ ಬಳಿಕ
ಭವಿಸಂಗ ಮಾಡಲಾಗದು,
ಭವಿಗೆ ದಾನವ ಕೊಡಲಾಗದು.
ಭವವಿರಹಿತ ಕಾರ್ಯವನೈದಿ,
ಭವಬೀಜದ ನೆಲೆಯನಾಶ್ರಯಿಸಿದಡೆ,
ಭವ ತಪ್ಪದು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Liṅgāṅgiyāda baḷika
bhāvisaṅga māḍalāgadu,
bhavige dānava koḍalāgadu.
Bhavavirahita kāryavanaidi,
bhavabījada neleyanāśrayisidaḍe,
bhava tappadu nōḍā,
kapilasid'dhamallikārjunā.