Index   ವಚನ - 1689    Search  
 
ಶರಣ ಎಂಬ ಶಬ್ದವಂತಿಂತಲ್ಲ. [ನೋಣಃ] ಎಂಬ ಸೂತ್ರದಿಂದ ಶರಣನೆನಿಸಿದನು. ಶರ ಎಂದರೆ ಬಾಣ, ನ ಎಂದಡೆ ಅಂಥ ಮನ್ಮಥಬಾಣವಿಲ್ಲದವ. [ಅವ] ನೇ ಶರಣ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.