•  
  •  
  •  
  •  
Index   ವಚನ - 1688    Search  
 
ಬಂದ ಪದಾರ್ಥವ ನೋಡಿ ಹಿಗ್ಗುವನಲ್ಲ ಶರಣ: ಬಾರದ ಪದಾರ್ಥವನಿಚ್ಚೈಸಿ ಕುಗ್ಗುವನಲ್ಲ ಶರಣ. ಶರಣನ ನಡೆಯೆ ಲಿಂಗರೂಪು; ಶರಣನ ನಡೆಯೆ ಲಿಂಗಪ್ರಸಾದ. ಪೂಜಿಸಿದಡೆ ಹರ್ಷಿಯಾಗನು, ಪೂಜಿಸದಿರೆ ಕ್ರೋಧಿಯಾಗನು. ಬೆಳೆಯುವ ಹೊಲ ಪ್ರಾಣಿಮಾತ್ರಕ್ಕಲ್ಲದೆ ತನ್ನೊಳಗಿಲ್ಲ. ಪೂಜಿಸಿದ ಫಲ ಭಕ್ತಂಗಲ್ಲದೆ ಲಿಂಗಕ್ಕಿಲ್ಲ. ಬಂದ ಪದಾರ್ಥ ಲಿಂಗವೆಂದನಲ್ಲದೆ ಪದಾರ್ಥವೆಂದು ಭಾವಿಸಲಿಲ್ಲ ನೋಡಾ ಕಪಿಲಸಿದ್ಧಮಲ್ಲಿಕಾರ್ಜುನಾ, ನಿಮ್ಮ ಶರಣನು.
Transliteration Banda padārthava nōḍi higguvanalla śaraṇa: Bārada padārthavaniccaisi kugguvanalla śaraṇa. Śaraṇana naḍeye liṅgarūpu; śaraṇana naḍeye liṅgaprasāda. Pūjisidaḍe harṣiyāganu, pūjisadire krōdhiyāganu. Beḷeyuva hola prāṇimātrakkallade tannoḷagilla. Pūjisida phala bhaktaṅgallade liṅgakkilla. Banda padārtha liṅgavendanallade padārthavendu bhāvisalilla nōḍā kapilasid'dhamallikārjunā, nim'ma śaraṇanu.