ವಚನ - 1696     
 
ಶರಣನ ನಡೆ ಅಂತಿಂತೆನಬೇಡ. ಶರಣ ಮಾದರ ಚೆನ್ನಯ್ಯನ ನಡೆ ಯಾವ ಆಗಮದಲ್ಲಿ ಹೇಳಿತ್ತು? ಶರಣ ಡೋಹರ ಕಕ್ಕಯ್ಯನ ನಡೆ ಯಾವ ವೇದದಲ್ಲಿ ಹೇಳಿತ್ತು? ನಡೆದ ಆಚರಣೆಯೆ ಸಚ್ಛೀಲ; ನುಡಿದ ವಾಕ್ಯವೆ ನಡೆ ಮೋಕ್ಷಪ್ರದಾಯಕ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.