ಸ್ಥಲವಿಡಿದಾಚರಿಸಬೇಕೆಂಬನ ಭಾಷೆ ಬಾಲಭಾಷೆ.
ಭಕ್ತನಾಗಿ, ಭಕ್ತಸ್ಥಲವಾವರಿಸುವುದದು ಯೋಗ್ಯವಯ್ಯಾ.
ಭಕ್ತನಾಗಿ, ಮಹೇಶಸ್ಥಲ ಅಳವಡಬಾರದೇನಯ್ಯಾ?
ಭಕ್ತನಾಗಿ, ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯಸ್ಥಲ
ಅಳವಡಬಾರದೇನಯ್ಯಾ?
ಮನೆಯಲ್ಲಿದ್ದ ಲೆತ್ತಗಳು ಮನೆಯ ಮೀರಿ ಮೀರಿ
ಹಾರಬಾರದೇನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Sthalaviḍidācarisabēkembana bhāṣe bālabhāṣe.
Bhaktanāgi, bhaktasthalavāvarisuvudadu yōgyavayyā.
Bhaktanāgi, mahēśasthala aḷavaḍabāradēnayyā?
Bhaktanāgi, mahēśa prasādi prāṇaliṅgi śaraṇa aikyasthala
aḷavaḍabāradēnayyā?
Maneyallidda lettagaḷu maneya mīri
hārabāradēnayyā, kapilasid'dhamallikārjunā.