Index   ವಚನ - 1698    Search  
 
ಷಟ್‍ಸ್ಥಲವೆಂಬ ಷಣ್ಮುಖಮುದ್ರೆಯೊಳು, ನವವಿಧಭಕ್ತಿ ಎಂಬ ನವನಾದ ಕೇಳದವ ಶರಣನೆ ಅಯ್ಯಾ? ಷಟ್‍ಸ್ಥಲವೆಂಬ ಷಣ್ಮುಖಮುದ್ರೆಯೊಳು, ಷಡಕ್ಷರವೆಂಬ ಮಂತ್ರವ ಜಪಿಸಿ, ಷಡ್ವಿಧಲಿಂಗವ ಪೂಜಿಸದವ ಶರಣನೆ ಅಯ್ಯಾ? ಷಟ್‍ಸ್ಥಲವೆಂಬ ಷಣ್ಮುಖಮುದ್ರೆಯೊಳು, ಬೀಜಾಕ್ಷರತ್ರಯಂಗಳನೋದಿ ಷಡಕ್ಷರಂಗಳ ಸಾಧಿಸಿ, ಷಣ್ಮುಖಶಿವನಾಗದವ ನಿಮ್ಮ ಶರಣನೆ ಅಯ್ಯಾ? ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.