ಯದ್ದೃಷ್ಠಂ ತನ್ನಷ್ಟಂ
ಎಂಬ ಶ್ರುತಿವಾಕ್ಯವ[ನ)ನರ್ಥವ
ಮಾಡಿ ಮುಳುಗದಿರಾ, ಮನವೆ.
ಭೇದಬುದ್ಧಿಯಿಂದರಿವುದದೆ ನಷ್ಟ ನೋಡಾ, ಮನವೆ.
ಭೇದವಳಿದು ಭವವಿರಹಿತಮೂರ್ತಿಯ
ಪಂಚತತ್ವವೆಂದು ನಂಬು ಕಂಡಾ, ಮನವೆ.
`ಸರ್ವಂ ಕಪಿಲಸಿದ್ಧಮಲ್ಲಿಕಾರ್ಜುನಮಯಂ ಜಗತ್' ಎಂಬುದು
ಪುಸಿಯೆ ಮನವೆ?
Art
Manuscript
Music
Courtesy:
Transliteration
Yaddr̥ṣṭaṁ tannaṣṭaṁ'
emba śrutivākyava[na)narthava
māḍi muḷugadirā, manave.
Bhēdabud'dhiyindarivude naṣṭa nōḍā, manave.
Bhēdavaḷidu bhavavirahitamūrtiya
pan̄catatvavendu nambu kaṇḍa, manave.
`Sarvaṁ kapilasid'dhamallikārjunamayaṁ jagat' embudu
pusiye manave?