Index   ವಚನ - 1705    Search  
 
ತದನುಸರಣಾತ್ ಜನ್ಮ ಜನ್ಮ ಎಂಬುದು ಹುಸಿಯಲ್ಲ ಹುಸಿಯಲ್ಲ, ನೋಡಯ್ಯಾ. ಭೇದಬುದ್ಧಿಯಿಂದಲ್ಲದೆ ಅಭೇದಬುದ್ಧಿಗೆ ತೋರಬಾರದು. `ಸರ್ವಂ ಕಪಿಲಸಿದ್ಧಮಲ್ಲಿಕಾರ್ಜುನಮಯಂ ಜಗತ್' ಎಂಬುದು ನಿಶ್ಚಯ ನೋಡಯ್ಯಾ, ಎಲೆ ಲಿಂಗವೆ.