ವಚನ - 1708     
 
ಲೀಲೆಯದು ಪರಬೊಮ್ಮದ ಇಚ್ಚೆ. ಇಚ್ಛೆಯದು ಸಕಲ ಜೀವಜಾಲೋತ್ಪತ್ತಿ. ಸಕಲ ಜೀವಜಾಲೋತ್ಪತ್ತಿಯದು ಜಗದ್ರಚನೆ. ಜಗದ್ರಚನೆಯದು ಜಗತ್ಪ್ರಳಯ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.