ತಿಳಿಯದ ಜನರು ಆವು ಶಿವನಲ್ಲ,
ಜಡಜೀವಿಗಳು ಎಂಬುವರು.
ಅದೆಂತಯ್ಯಾ `ಪಂಚತತ್ತ್ವಂ ಮುಖೋದ್ಭೂತಂ'
ಎಂಬಾಗಮವಾಕ್ಯಸಿದ್ಧಿ?
ಪಂಚತತ್ತ್ವಂಗಳೆಲ್ಲ ಶಿವನ ಪಂಚಮುಖದಿಂದಾದವು.
ಆ ಪಂಚತತ್ತ್ವದಿಂದ ಸಕಲ
ಚರಾಚರಬ್ರಹ್ಮಾಂಡವಾಯಿತ್ತಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ
ಲೀಲೆಯಿಂದ ಕಲ್ಲಯ್ಯಾ.
Transliteration Tiḷiyada janaru āvu śivanalla,
jaḍajīvigaḷu embuvaru.
Adēntayyā `pan̄catattvaṁ mukhōdbhūtaṁ'
embāgamavākyasid'dhi?
Pan̄catattvaṅgaḷella śivana pan̄camukhadindādavu.
Ā pan̄catattvadinda sakala
carācarabrahmāṇḍavāyittayyā,
kapilasid'dhamallikārjunayyana
līleyinda kallayya.