Index   ವಚನ - 1710    Search  
 
ಬ್ರಾಹ್ಮಣನ ಉತ್ಪತ್ತಿ ಸದ್ಯೋಜಾತಮುಖದಿಂದಾಯಿತ್ತು. ಕ್ಷತ್ರಿಯನ ಉತ್ಪತ್ತಿ ವಾಮದೇವಮುಖದಿಂದಾಯಿತ್ತು. ವೈಶ್ಯನ ಉತ್ಪತ್ತಿ ಅಘೋರಮುಖದಿಂದಾಯಿತ್ತು. [ಶೂದ್ರನ ಉತ್ಪತ್ತಿ ತತ್ಪುರುಷಮುಖದಿಂದಾಯಿತ್ತು]. ಲಿಂಗಾಂಗಿ ಉತ್ಪತ್ತಿ ಈಶಾನ್ಯಮುಖದಿಂದಾಯಿತ್ತು. ಪ್ರಮಥರ ಉತ್ಪತ್ತಿ ನಿರಂಜನ ಪ್ರಣವದ ಘೋಷವುಳ್ಳ ಕಪಿಲಸಿದ್ಧಮಲ್ಲಿಕಾರ್ಜುನನ ಗೋಪ್ಯಮುಖದಿಂದಾಯಿತ್ತು ನೋಡಾ, ಕಲ್ಲಯ್ಯಾ.