ವಚನ - 1717     
 
ಮುಟ್ಟಿಹರೆಂದು ಬಟ್ಟೆಯನ್ನುಲ್ಲಂಘಿಸುವರ ನೋಡಾ! ನೋಡಿ ನೋಡಿ ನಾಚಿತ್ತಯ್ಯಾ ಎನ್ನ ಮನ. ಮುಟ್ಟಿದ ಪರುಷ ಪಾಷಾಣವಾಗುವುದೆ ಅಯ್ಯಾ? ಮಾಡಬಾರದೆಂದು ಸಂದೇಹವುಳ್ಳಡೆ ಮಹೇಶಸ್ಥಲವೆಂತಯ್ಯಾ? ಮುಟ್ಟಬಾರದು ಮುಟ್ಟಬಾರದು ಮಲತ್ರಯಂಗಳ. ಮುಟ್ಟದ ಬಟ್ಟಬಯಲು ಗಟ್ಟಿಗೊಂಡಚ್ಚ ಮಹೇಶನ ತೋರಾ, ಕಪಿಲಸಿದ್ಧಮಲ್ಲಿಕಾರ್ಜುನಾ.