•  
  •  
  •  
  •  
Index   ವಚನ - 1716    Search  
 
ಆ ದೇವ ಬಂದಡೆ ಈ ದೇವಿಯ ಸಂಭ್ರಮ ನೋಡಾ! ಈ ದೇವಿ ಹೋದಡೆ ಆ ದೇವನ ಮನೋವ್ಯಾಕುಲ ನೋಡಾ! ಈ ದೇವಿಯಿಲ್ಲದಿರ್ದಡೆ ಆ ದೇವ ಸೈರಿಸನು, ಆ ದೇವನಿಲ್ಲದಿರೆ ಈ ದೇವಿ ಸೈರಿಸಳು. ಒಂದರಲ್ಲಲ್ಲದೆ ಎರಡರ್ಥದಲ್ಲಿ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ā dēva bandaḍe ī dēviya sambhrama nōḍā! Ī dēvi hōdaḍe ā dēvana manōvyākula nōḍā! Ī dēviyilladirdaḍe ā dēva sairisanu, ā dēvanilladire ī dēvi sairisaḷu. Ondarallallade eraḍarthadalli nōḍā, kapilasid'dhamallikārjunā.