Index   ವಚನ - 1723    Search  
 
ಅನಿರ್ವಾಚ್ಯವೆ ವಾಚ್ಯವಾದಲ್ಲಿ ಹಕಾರವೆನಿಸಿತ್ತು; ಆ ಹಕಾರವೆ [ನಿರಂಜನ] ಪ್ರಣವವೆನಿಸ್ತಿತ್ತು; ಆ ನಿರಂಜನ ಜಂಗಮಾಕೃತಿ, ಜಗದಾಧಾರ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.