Index   ವಚನ - 1722    Search  
 
ನಿನ್ನ ನೀ ತಿಳಿದು ನೋಡಿದಡೆ ಶಿವಮಯ ಜಗತ್ತು ನೋಡಾ. ಓಂಕಾರ ಪ್ರಣವವೆ ಪ್ರಕೃತಿಯಾಗಿ ನಿಂದಿತ್ತು; ನಕಾರ ಪ್ರಣವವೆ ಪೃಥ್ವಿಯಾಗಿ ನಿಂದಿತ್ತು; ಮಕಾರ ಪ್ರಣವವೆ ಉದಕವಾಗಿ ನಿಂದಿತ್ತು; ಶಿಕಾರ ಪ್ರಣವವೆ ಅಗ್ನಿಯಾಗಿ ನಿಂದಿತ್ತು; ವಕಾರ ಪ್ರಣವವೆ ವಾಯುವಾಗಿ ನಿಂದಿತ್ತು; ಯಕಾರ ಪ್ರಣವವೆ ಸರ್ವವಸ್ತು ಆಚರಿಸುವುದಕ್ಕೆ ಆಕಾಶವಾಗಿ ನಿಂದಿತ್ತು. ನೆನೆನೆನೆದು ಸುಖಿಯಾದೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಲಿಂಗವೆ.