•  
  •  
  •  
  •  
Index   ವಚನ - 1727    Search  
 
ಬಂದಯ್ಯಗಳಿಗನ್ನವ ಕೊಟ್ಟೆನೆಂಬವನ ಮುಖವ ನೋಡಲಾಗದು. ಕೊಡಲಿಕ್ಕಾತನೇನು ಅನಾದಿ ಬಸವನೊ? ತೆಗೆದುಕೊಳಲಿಕ್ಕಾತನೇನು ಅನಾದಿ ಪ್ರಭುವೊ? ಹೊಲಿದು ಬರುವುದೆಲ್ಲ ಹೊಲೆಪದಾರ್ಥ, ನಿರುಪಾಧಿಯಿಂದ ಬಂದ ಪದಾರ್ಥ ಶಿವಪ್ರಸಾದ. ಆ ಪ್ರಸಾದವೆ ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಂಗೆ ಮಹಾ ಆರೋಗಣೆಯಾಯಿತ್ತು!
Transliteration Bandayyagaḷigannava koṭṭenembavana mukhava nōḍalāgadu. Koḍalikātanēnu anādi basavano? Tegedukoḷalikātanēnu anādi prabhuvo? Holidu baruvudella hoḷepadārtha, nirupādhiyinda banda padārtha śivaprasāda. Ā prasādave enna kapilasid'dhamallikārjunaṅge mahārōgaṇeyittu!