•  
  •  
  •  
  •  
Index   ವಚನ - 1726    Search  
 
ಮಗನ ಕೊಟ್ಟು ಮನೆಯ ಸೇರಿದೆನೆಂಬ ಬಿಂಕ ಬೇಡ ಬೇಡ. ಸ್ತ್ರೀಯ ಕೊಟ್ಟು ತ್ರಿಣೇತ್ರನಾದೆನೆಂಬ ಬಿಂಕ ಬೇಡ ಬೇಡ. ರುಂಡವ ಕೊಟ್ಟು ಬ್ರಹ್ಮಾಂಡಶೇಖರನಾದೆನೆಂಬ ಬಿಂಕ ಬೇಡ ಬೇಡ `ಶಿವೋ ದಾತಾ ಶಿವೋ ಭೋಕ್ತಾ' ಎಂಬ ಶ್ರುತಿವಾಕ್ಯವ ನಂಬಿ ನಂಬಿ ನಡೆಯಿರಾ, ಕಪಿಲಸಿದ್ಧಮಲ್ಲಿಕಾರ್ಜುನನ ಮಂದಿರದಲ್ಲಿ.
Transliteration Magana koṭṭu maneya sēridenemba biṅka bēḍa bēḍa. Strīya koṭṭu triṇētranādenemba biṅka bēḍa bēḍa. Ruṇḍava koṭṭu brahmāṇḍaśēkharanādenemba biṅka bēḍa bēḍa `śivō dātā śivō bhōktā' emba śrutivākyava nambi nambi naḍeyirā, kapilasid'dhamallikārjuna mandiradalli.