ಪಶುಗಳಿಗೆಲ್ಲ ಪೃಷ್ಠದಲ್ಲಿ ಬಾಲವಿದ್ದಡೆ,
ಮಾಡುವೆನೆಂಬವನ ಮುಖದಲ್ಲಿ ಬಾಲ ನೋಡಾ.
ಪಶುಗಳಿಗೆಲ್ಲ ಮಸ್ತಕದಲ್ಲಿ ಶೃಂಗವಿದ್ದಡೆ,
ಮಾಡಿದ ಪೂಜೆ ಕೈ ಕೊಂಡೆನೆಂಬವನ
ಮನದ ಕೊನೆಯ ಮೇಲೆ ಶೃಂಗ ನೋಡಾ.
ಮಾಡಿದೆನೆಂಬುದುಳ್ಳನ್ನಕ್ಕ ಭಕ್ತನೆಂಬೆ[ನೆ] ಅಯ್ಯಾ?
ಮಾಡಿಸಿಕೊಂಡೆನೆಂಬುದುಳ್ಳನ್ನಕ್ಕ,
ನಿರುಪಾದಿ ನಿರಂಜನ ಜಂಗಮವೆಂಬೆನೆ ಅಯ್ಯಾ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.