ಒಂದೇ ವಸ್ತು, ತನ್ನ ವಿಚಿತ್ರಮಹಿಮೆಯ
ಕೇಳುವಲ್ಲಿ ಕರ್ಣವಾಗಿ,
ಸ್ಪರ್ಶಿಸುವಲ್ಲಿ ತ್ವಕ್ಕಾಗಿ,
ನೋಡುವಲ್ಲಿ ನೇತ್ರವಾಗಿ,
ರುಚಿಸುವಲ್ಲಿ ರಸನೆಯಾಗಿ,
ಪರಿಮ[ಳವ ಘ್ರಾಣಿ]ಸುವಲ್ಲಿ ಘ್ರಾಣವಾಗಿ,
ನಿಂದೆ ನೀ ನೋಡಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
Art
Manuscript
Music
Courtesy:
Transliteration
Ondē vastu, tanna vicitramahimeya
kēḷuvalli karṇavāgi,
sparśisuvalli tvakkāgi,
nōḍuvalli nētravāgi,
rucisuvalli rasaneyāgi,
parima[ḷava ghrāṇi]suvalli ghrāṇavāgi,
ninde nī nōḍayya,
kapilasid'dhamallikārjunayya.
ಸ್ಥಲ -
ಶರಣನ ವಾಗ್ರಚನಪ್ರತಾಪಸ್ಥಲ