ಪೂಜಾರ್ಥವಾಗಿ ಎನ್ನ ಹಸ್ತಕ್ಕೆ
ಇಷ್ಟಲಿಂಗವಾಗಿ ಬಂದೆಯಯ್ಯಾ.
ಪೂಜಿಸುವಲ್ಲಿ ಭಕ್ತನಾಗಿ ನಿಂದೆಯಯ್ಯಾ.
ಜನ್ಮವಳಿವಲ್ಲಿ ಜಂಗಮವಾಗಿ ಬಂದು,
ಪಾದೋದಕ ಪ್ರಸಾದವ ಕೊಟ್ಟೆ.
ಪೂಜಾಫಲ ತೀರ್ಗಡೆ ಮಾಡಬೇಕೆಂದು,
ಎನ್ನ ಮನಭಾಂಡಾರವ ನೋಡಬಂದೆಯಯ್ಯಾ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಲಿಂಗವೆ.
Transliteration Pūjārthavāgi enna hastakke
iṣṭaliṅgavāgi bandeyayya.
Pūjisuvalli bhaktanāgi nindeyayya.
Janmavaḷivalli jaṅgamavāgi bandu,
pādōdaka prasādava koṭṭe.
Pūjāphala tīrgaḍe māḍabēkendu,
enna manabhāṇḍārava nōḍabandeyayya,
ele kapilasid'dhamallikārjunaliṅgave.