ವಚನ - 1748     
 
ಚರಿಸಿ ಜಂಗಮವೆನಿಸಿತ್ತಯ್ಯಾ ಲಿಂಗವು. ನೆಲಸಿ ಲಿಂಗವೆನಿಸಿತ್ತಯ್ಯಾ ಲಿಂಗವು. ಇದರಿರವ ಅರುಹಿದಲ್ಲಿ ಗುರುವೆನಿಸಿತ್ತಯ್ಯಾ ಲಿಂಗವು. ಗುರು ಲಿಂಗ-ಜಂಗಮಕ್ಕೆ ತಿಲಾಂಶ ಭೇದವಿಲ್ಲ ನೋಡಾ, ಎಲೆ ದೇವಾ. ಭೇದಿಸದವಗೆ ಭವಬಾಧೆ ತಪ್ಪುವದೆ, ದೇವರ ದೇವ ಕಪಿಲಸಿದ್ಧಮಲ್ಲಿಕಾರ್ಜುನದೇವಾ?