ಪೂಜಾಫಲದಿಂದ ಅರ್ಜುನ ಬಾಣಂಗಳೆಲ್ಲ
ಅರಳ್ಗಳಾದುವಯ್ಯಾ ನಿನ್ನಂಗಕ್ಕೆ.
ಪೂಜಾಫಲದಿಂದ ಕನ್ನಯ್ಯನ ಮಾಂಸವೆಲ್ಲ
ಪರಮ ಷಡ್ರುಚಿಯಾಯಿತ್ತಯ್ಯಾ, ನಿನ್ನ ರಸನೆಗೆ.
ಪೂಜಾಫಲದಿಂದ ಚೋಳಿಯ ರತಿ
ಪರಮಲೀಲಾನಂದವಾಯಿತ್ತಯ್ಯಾ, ದೃಷ್ಟಿಗೆ.
ಪೂಜಾಫಲದಿಂದ ಅಮ್ಮನವರ ಅಪಶಬ್ದಗಳೆಲ್ಲ
ಸಾಮಗಾನವ ತಿರಸ್ಕರಿಸಿದುವಯ್ಯಾ ನಿನ್ನ ಶ್ರೋತ್ರಕ್ಕೆ.
ಪೂಜಾಫಲದಿಂದಂದು ಚಂದ್ರಚೂಡಿಯ ಕೈಯ
ಮದುಗುಣಿಯ ಪುಷ್ಪ
ಗಂಧಮಯವಾಗಿ ಮಸ್ತಕಕ್ಕಲಂಕಾರವಾಯಿತ್ತಯ್ಯಾ.
ಪೂಜಾಫಲ ಅಂತಿಂತಲ್ಲ, ಪೂಜಾಫಲ ಸ್ವಾದೀನವಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Pūjāphaladinda arjuna bāṇaṅgaḷella
araḷagaḷāduvayyā ninnaṅgakke.
Pūjāphaladinda kannayyana mānsavella
parama ṣaḍruciyāyittayyā, ninna rasanege.
Pūjāphaladinda cōḷiya rati
paramalīlānandavāyittayyā, dr̥ṣṭige.
Pūjāphaladinda am'manavara apaśabdagaḷella
sāmagānava tiraskarisidavayya ninna śrōtrakke.
Pūjāphaladindandu candracūḍiya kaiya
madhuguṇiya puṣpa
gandhamayavāgi mastakakkalaṅkāravāyittayyā।
pūjāphala antintalla, pūjāphala svādīnavayyā,
kapilasid'dhamallikārjunā.
ಸ್ಥಲ -
ಶರಣನ ವಾಗ್ರಚನಪ್ರತಾಪಸ್ಥಲ