Index   ವಚನ - 1769    Search  
 
ಜಪಿಸಬೇಕು ಜಪಿಸಬೇಕು ಸತ್ಯಶೀಲವ. ಜಪಿಸಬೇಕು ಜಪಿಸಬೇಕು ಪರಹಿತವ. ಜಪಿಸಬೇಕು ಜಪಿಸಬೇಕು ಪರಸ್ತ್ರೀ ಪರಧನವನೊಲ್ಲೆನೆಂಬುದ. ಜಪಿಸಬೇಕು ಜಪಿಸಬೇಕು ಗುರು-ಲಿಂಗ-ಜಂಗಮ ದಾಸೋಹವ. ಜಪಿಸಬೇಕು ಜಪಿಸಬೇಕು `ಕಪಿಲಸಿದ್ಧಮಲ್ಲಿಕಾರ್ಜುನಾಯ ನಮಃ' ಎಂದು, ಕೇಳಾ ಕೇದಾರ ಗುರುದೇವಾ.