•  
  •  
  •  
  •  
Index   ವಚನ - 1770    Search  
 
ಜಪಿಸಬೇಕು ಜಪಿಸಬೇಕು ದೇಹ ನಾನಲ್ಲೆಂದು. ಜಪಿಸಬೇಕು ಜಪಿಸಬೇಕು ಜೀವಾತ್ಮ ಸಾಕ್ಷಿಯಲ್ಲೆಂದು. ಜಪಿಸಬೇಕು ಜಪಿಸಬೇಕು ನಾ ಚೆನ್ನಬಸವನೆಂದು. ಜಪಿಸಬೇಕು ಜಪಿಸಬೇಕು ಕಪಿಲಸಿದ್ಧಮಲ್ಲಿಕಾರ್ಜುನನ ಪಾದಪದ್ಮ ಭ್ರಮರವೆಂದು.
Transliteration Japisabēku dēha nānallendu. Japisabēku jīvātma sākṣiyallendu. Japisabēku nā cennabasavanendu. Japisabēku kapilasid'dhamallikārjuna pādapadma bhramaravendu.