ಆಕಾಶದಲ್ಲಿಯ ಮೇಘದಂತೆ,
ಜಲದಲ್ಲಿಯ ತೆರೆಯಂತೆ
ಬರುತ್ತಿದೆ ನೋಡಾ ಈ ಘಟ.
ಬಂದುದರಿಯೆ, ಹೋದುದರಿಯೆ.
ನಿಂದ ವಸ್ತುವದು ನಿಜವೆಂದರಿದೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ākāśadalliya mēghadante,
jaladalli tereyante
baruttide nōḍā ī ghaṭa.
Bandudariye, hōdudariye.
Ninda vastuvadu nijavendaride nōḍā,
kapilasid'dhamallikārjunā.