ವಚನ - 1776     
 
ಅರಿಯಲಿ, ಅರಿಯದೆ ತಾ ಸಹಜ ಇರಲಿ, ಕಡೆಯಲ್ಲಿ ಪರಾತ್ಪರವಸ್ತು ತಾನೆಂಬುದು ದಿಟ ನೋಡಾ. ಅರಿದ ದಾರಿಯದು ಆರನು ಕೇಳದು; ಅರಿಯದ ದಾರಿಯದು ನೂರಾರನು ಕೇಳಿ, ಕಡೆಗೆ ಕಪಿಲಸಿದ್ಧಮಲ್ಲಿಕಾರ್ಜುನ ನಗರ ಸೇರುವುದು ಓರೆಯಾಗದು, ಕೇದಾರ ಗುರುವೆ.