•  
  •  
  •  
  •  
Index   ವಚನ - 1779    Search  
 
ಪಂಚಮುಖ ವರ್ಣಂಗಳವು ಪಂಚಮುಖನಂಘ್ರಿರೇಣುವಿಗೆ ಯೋಗ್ಯ ನೋಡಾ. ಷಣ್ಮುಖವರ್ಣಂಗಳವು ಅಷ್ಟಮೂರ್ತಿಯ ಪದಪದ್ಮದೈಕ್ಯಕ್ಕೆ ಯೋಗ್ಯ ನೋಡಾ. ಷಡ್ಚಕ್ರವರ್ಣಂಗಳವು ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಐಕ್ಯ ನೋಡಾ, ಎಂದರುಹಿದ ಗುರು ಚೆನ್ನಬಸವಣ್ಣನ ಪಾದವ ನೆನೆನೆನೆದು ಮುಕ್ತನಾದೆ ನೋಡಾ.
Transliteration Pan̄camukha varṇaṅgaḷu pan̄camukhanaṅghrirēṇuvige yōgya nōḍā. Ṣaṇmukhavarṇaṅgaḷavu aṣṭamūrtiya padapadmadaikyakke yōgya nōḍā. Ṣaḍcakravarṇaṅgaḷavu kapilasid'dhamallikārjunanalli aikya nōḍā, endahida guru cennabasavaṇṇana pādava nenenenedu muktanāde nōḍā.