ವಚನ - 1780     
 
ಮೂರಕ್ಷರದಲ್ಲಿ ಏಳು ಭುವನ ಓಲಾಡುತ್ತಿದೆ. ಮೂರಕ್ಷರದಲ್ಲೀರಾರು ಪ್ರಣವಂಗಳಾಡುತ್ತಿವೆ. ಮೂರಕ್ಷರ ಮೂರು ಮೂರ್ತಿಯ ಕ್ರಿಯೆಯಾಚರಿಸುತ್ತಿದೆ. ಮೂರಕ್ಷರದಲ್ಲಿ ಮಾರಹರ ಕಪಿಲಸಿದ್ಧಮಲ್ಲಿಕಾರ್ಜುನನ ರೂಹು ತೋರುತ್ತಿದೆ.