ವಚನ - 1781     
 
ಆರು ಪ್ರಣವದ ಕಡೆಯಕ್ಷರ ಚಿದಾಕಾಶದ ಅಂಗ ನೋಡಾ. ಆರು ಪ್ರಣವದ ಮೂಲಾಕ್ಷರ ಚಿನ್ಮಯ ಮಂದಿರ ನೋಡಾ. ಆರು ಪ್ರಣವದ ಮಧ್ಯ ನಾಲ್ಕಕ್ಷರ ಶಿವಶಕ್ತಿರೂಪು ನೋಡಾ. ಆರು ಪ್ರಣವದ ಜಪವದು ಕಪಿಲಸಿದ್ಧಮಲ್ಲಿಕಾರ್ಜುನನ ಒಲುಮೆ ನೋಡಾ.