Index   ವಚನ - 1795    Search  
 
ಸಾಕುವವರು ತಾವಾದ ಬಳಿಕ ನೂಕುವವರು ತಾವಾಗಬಾರದಯ್ಯಾ. ಹೇಳಿದವರು ತಾವಾದ ಬಳಿಕ ಈ ಪ್ರಪಂಚದಲ್ಲೆನ್ನ ಗೋಳಿಡಿಸಬಾರದಯ್ಯಾ. ಕಪಿಲಸಿದ್ಧಮಲ್ಲಿಕಾರ್ಜುನಾ.