ವಚನ - 1797     
 
ನಿರಾಕಾರಮೂರ್ತಿ ನೀನಾಕಾರಕ್ಕೆ ಬಂದೆ ಎನಲಾರೆ. ಆಕಾರಮೂರ್ತಿ ನಿರಾಕಾರಕ್ಕೆ ಹೋಹುದೆಂದೆನಲಾರೆ. ನಿಂತಡೆ ನೆರಳಿಲ್ಲ, ನೋಡಿದಡೆ ರೂಹಿಲ್ಲ; ಮುಟ್ಟಿದಡೆ ಸ್ಪರ್ಶವಿಲ್ಲ, ನಡೆದಡೆ ಹೆಜ್ಜೆಯಿಲ್ಲ, ನೀನೊಡೆಯ ಕಪಿಲಸಿದ್ಧಮಲ್ಲಿಕಾರ್ಜುನನಲ್ಲೆನಬಹುದೆ?