ವಿಷ ಉಂಡು ದಣಿಯಲಾರದೆ,
ವಿಷ ನೈವೇದ್ಯವ ಮಾಡಿಕೊಂಡ ನೋಡಾ, ಈ ದೇವಾ.
ತ್ರಿಪುರಾಂತಕ ಕೆರೆಯಗುಳಿ ದಣಿಯಲಾರದೆ,
ಹಲವು ಗುಡ್ಡ ರೂಪಾಗಿ ಕೆರೆಯಗುಳಿಸಿಕೊಂಡ ನೋಡಾ
[ಈ ದೇವ].
ಇದ್ದ ದೇವಾಲಯವಲ್ಲದೆ ಮತ್ತೆ
ದೇವಾಲಯವ ಮಾಡಿಸಿಕೊಂಡ ನೋಡಾ, ಈ ದೇವ.
ತಾನಖಂಡಮೂರ್ತಿಯ ರೂಪು ಧರಿಸದೆ,
ಇಲ್ಲಿ ಲಕ್ಷ ತೊಂಬತ್ತಾರು ಸಾಸಿರ[ವಾಗಿ]ನೆಲಸಿಪ್ಪ ನೋಡಾ
ಈ ದೇವ,
ಕಪಿಲಸಿದ್ಧಮಲ್ಲಿಕಾರ್ಜುನದೇವ.
Art
Manuscript
Music Courtesy:
Video
TransliterationViṣa uṇḍu daṇiyalārade,
viṣa naivēdyava māḍikoṇḍa nōḍā, ī dēvā.
Tripurāntaka kereyaguḷi daṇiyalārade,
halavu guḍḍa rūpāgi kereyaguḷisikoṇḍa nōḍā
[ī dēva].
Idda dēvālayavallade matte
dēvālayava māḍisikoṇḍa nōḍā, ī dēva.
Tānakhaṇḍamūrtiya rūpu dharisade,
illi lakṣa tombattāru sāsira[vāgi]nelasippa nōḍā
ī dēva,
kapilasid'dhamallikārjunadēva.