Index   ವಚನ - 1808    Search  
 
ಇಷ್ಟಲಿಂಗ ಪೂಜೆಯದು ಅಷ್ಟ್ಯೆಶ್ವರ್ಯಪ್ರದವಾಯಿತ್ತು. ಪ್ರಾಣಲಿಂಗ ಪೂಜೆಯದು ಅಖಂಡಚಿದೈಶ್ವರ್ಯಪ್ರದವಾಯಿತ್ತು. ಭಾವಲಿಂಗಪೂಜೆಯದು ನಿರ್ಭಾವ ನಿಜಾನಂದ ವಸ್ತುಸ್ವರೂಪವಾಯಿತ್ತು, ಕೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.