ವಚನ - 1809     
 
ಅಕಾರವದು ಇಷ್ಟಲಿಂಗ, ಉಕಾರವದು ಪ್ರಾಣಲಿಂಗ, ಮಕಾರವದು ಭಾವಲಿಂಗ. ಭಕ್ತಂಗಾಗಲಿ ಷಟ್‍ಸ್ಥಲಬ್ರಹ್ಮಿಯಾದವಂಗಾಗಲಿ, ಲಿಂಗತ್ರಯ ಪೂಜೆಯು ಬೇಕು. ಲಿಂಗತ್ರಯ ಪೂಜೆಯರಿತು ಮಾಡದವರ ಮನದೆರೆದು ಮಾತಾಡೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಲಿಂಗವೆ.