ವಚನ - 1815     
 
ಘನಕ್ಕೆ ಘನವೆಂಬವರ ಮನಕ್ಕೆ ತಂದು ಅನುಗೊಳಿಸಿದೆಯಲ್ಲಾ, ಅಲ್ಲಮದೇವಾ. `ಸರ್ವಂ ಖಲ್ವಿದಂ ಬ್ರಹ್ಮ' ಎಂದು ವಾದಿಸಿದಲ್ಲಿ, ಲಿಂಗತ್ರಯದಲ್ಲಿ ಬೋಧಗೊಳಿಸಿದೆಯಲ್ಲಾ, ಅಲ್ಲಮದೇವಾ. ಮಾಡಿ ನೀಡುವೆನೆಂಬವರ ರೂಹು ಮೂಡದಂತೆ ಮಾಡಿದೆಯಲ್ಲಾ, ಅಲ್ಲಮದೇವಾ. ದೃಷ್ಟಿಗೆ ಬಿದ್ದವರ ಮಹದೈಶ್ವರ್ಯಕ್ಕಿಟ್ಟು, ನೀ ನೆಟ್ಟನೆ ಬೆಟ್ಟದಲ್ಲಿಯ ಬಟ್ಟಬಯಲ ಕದಳಿಯಲಿ ಹೋಗಿ ಬಟ್ಟಬಯಲಾಗಿ, ಜಗದಂತರ್ಯಾಮಿ ಕಪಿಲಸಿದ್ಧಮಲ್ಲಿಕಾರ್ಜುನನಾಗಿ ನಿಂದೆಯಲ್ಲಾ ಅಲ್ಲಮದೇವಾ.