•  
  •  
  •  
  •  
Index   ವಚನ - 1814    Search  
 
ಮೂರ್ತಿ ಮೂರರಲ್ಲಿ [ಅ]ಮೂರ್ತಿಯ[ಲೆಂ]ದು ಬಂದೆಯಲ್ಲಾ ಮಡಿವಾಳಾ. ದೇಹ ಮೂರರಲ್ಲಿ ನಿರ್ದೇಹಿಯಾಗಿ ಬಂದಾಚರಿಸಿದೆಯಲ್ಲಾ ಮಡಿವಾಳಾ. ವಾಣಿ ನಾಲ್ಕರಲ್ಲಿ ಆನು ನಾನಲ್ಲೆಂಬ ಭಾವವಳಿದು ಶಬ್ದ ಮುಗ್ಧವಾಗಿ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಚಿದಾಕಾಶವಾಗಿ ಪೋದೆಯಲ್ಲಾ ಮಡಿವಾಳಾ.
Transliteration Mūrti mūraralli [a]mūrtiya[leṁ]du bandeyallā maḍivāḷā. Dēha mūraralli nirdēhiyāgi bandācarisideyalla maḍivāḷa. Vāṇi nālkaralli ānu nānallemba bhāvavaḷidu śabda mugdhavāgi kapilasid'dhamallikārjunanalli cidākāśavāgi podeyallā maḍivāḷā.