Index   ವಚನ - 1819    Search  
 
ಗರ್ಭವಿದ್ದಂಗನೆಗೆ ಒಮ್ಮೆ ಸಂಭ್ರಮವಲ್ಲದೆ, ಗರ್ಭಗರ್ಭಕ್ಕೊಮ್ಮೆ ಸಂಭ್ರಮವಿಲ್ಲ ನೋಡಾ, ಗುರುವೆ. ನೀನಿದ್ದ ಭಕ್ತಿಗೊಮ್ಮೆ ಒರೆದು ನೋಡಬಾರದು ನೋಡಾ, ಗುರುವೆ. ನಾನಿದ್ದ ಕೇರಿಯವರೆಲ್ಲರ ಒಮ್ಮೆ ಲಜ್ಜಿಸಬಹುದಲ್ಲದೆ, ಮತ್ತೆ ಮತ್ತೆ ಲಜ್ಜಿಸುವುದು ಬೇಡ, ಕಪಿಲಸಿದ್ಧಮಲ್ಲಿಕಾರ್ಜುನ ಗುರುವೆ.