ವಚನ - 1835     
 
ಶಿವನಿರ್ಮಿತ ಮಂತ್ರಂಗಳು ಕೋಟಾನುಕೋಟಿ. ಶಿವನಿರ್ಮಿತ ಯಂತ್ರಂಗಳು ಕೋಟಾನುಕೋಟಿ. ಶಿವನಿರ್ಮಿತ ಮಹಾಮೂಲಿಕೆಗಳು ಕೋಟಾನುಕೋಟಿ. ಶಿವನಿರ್ಮಿತ ವಿದ್ಯಾದಿಗಳು ಕೋಟಾನುಕೋಟಿ. ಇದರಂದವನರಿಯಬೇಕೆಂಬವರು ಕೋಟಾನುಕೋಟಿ. ಸಿದ್ಧಿಯ ಹೊಂದಿ ಪ್ರಸಿದ್ಧಿಗೆ ಬಂದವರು, ಕೋಟಾನುಕೋಟಿಯೊಳಗೆ ಕೋಟಿಯಿಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಲಿಂಗವೆ.