ಯೋಗಿಯ ಹೊಲಬು ಯೋಗಿಯಾದವಂಗಲ್ಲದೆ,
ಇತರ ನರಂಗೆ ಸಾಧಿಸಬಾರದು ಕೇಳಯ್ಯಾ.
ಧಾತುವಾದವದು ರಸವಾದಿಯಾದವಂಗಲ್ಲದೆ,
ಇತರ ನರಂಗದು ಸಾಧಿಸಬಾರದು ಕೇಳಯ್ಯಾ.
ನೋಡಿ ಮಾಡುವುದಾದಡೆ ಭವವೆಲ್ಲಿಹುದು,
ದರಿದ್ರವೆಲ್ಲಿಹುದು ಹೇಳಯ್ಯಾ, ಕಪಿಲಸಿದ್ಧಯ್ಯಾ.
Transliteration Yōgiya holabu yōgiyādavaṅgallade,
itara naraṅge sādhisabāradu kēḷayya.
Dhātuvādavadu rasavādiyādavaṅgallade,
itara naraṅgadu sādhisabāradu kēḷayya.
Nōḍi māḍuvudādaḍe bhavavellihudu,
daridravellihudu hēḷayyā, kapilasid'dhayyā.