ಮಣಿ ಮೂರರಲ್ಲಿ ಗುಣತ್ರಯಾತೀತನ ಕಂಡೆ.
ಗುಣತ್ರಯಾತೀತನಲ್ಲಿ ಹವಣಿಸಬಾರದ ಆನಂದಯೋಗವ ಕಂಡೆ.
ಆ ಆನಂದಯೋಗವ ಸಾಧಿಸಬಾರದು, ಸಾಧಿಸಬಾರದು,
ಮತ್ತೆ ಭವಭವದ ದಾವಾನಲ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Maṇi mūraralli guṇatrayātītana kaṇḍe.
Guṇatrayātītanalli havaṇisabārada ānandayōgava kaṇḍe.
Ā ānandayōgava sādhisabāradu, sādhisabāradu,
matte bhavabhavada dāvānala, kapilasid'dhamallikārjunā.