•  
  •  
  •  
  •  
Index   ವಚನ - 1850    Search  
 
ಮೂರು ಗುಣ ಮುರಿಮುರಿದು ಮೂರಕ್ಕೆ ತಂದು ಮುರಿದಿಟ್ಟಿತ್ತು ನೋಡಾ, ಮಾರಹರ ಪಾದಪದ್ಮಭ್ರಮರ. ಮೂರು ಗುಣದಂತಾಚರಿಸಬಾರದು; ಮೂರು ಗುಣ ಬಿಡಬಾರದು ನೋಡಾ. ಮೂರರಿಂದಾರು ಲಿಂಗವ ದಾಂಟಿ, ಮೂರರಲ್ಲಿ ಐಕ್ಯವ ನೋಡೆ ಪುರಾರಿ ಪರಮಾತ್ಮ ಕಪಿಲಸಿದ್ಧಮಲ್ಲಿಕಾರ್ಜುನ ತಾನೆ ನೋಡಾ, ಮಾರಯ್ಯಾ.
Transliteration Mūru guṇa murimuridu mūrakke tandu muridittu nōḍā, mārahara pādapadmabhramara. Mūru guṇadantācarisabāradu; mūru guṇa biḍabāradu nōḍā. Mūrarindāru liṅgava dāṇṭi, mūraralli aikyava nōḍe purāri paramātma kapilasid'dhamallikārjuna tāne nōḍā, mārayya.